ಜಿಯೋ ಫೈಬರ್ ಸೆಟ್ ಟಾಪ್ ಬಾಕ್ಸ್ ಫೋಟೋ ಲೀಕ್

ಟಿವಿ ಹಾಗೂ ಇಂಟರ್ನೆಟ್ ಹಾಗೂ ವಾಯ್ಸ್ ಕಾಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೈಪ್ ಸೃಷ್ಟಿ ಮಾಡಿರುವ ರಿಲಯನ್ಸ್ ಜಿಯೋ ಫೈಬರ್ ಸೇವೆ ಇನ್ನೇನು ದೇಶದ ಮನೆಮನೆಗಳಿಗೆ ತಲುಪುವುದರಲ್ಲಿದೆ.

ಈ ಸಂದರ್ಭದಲ್ಲಿ ಜಿಯೋ ಸ್ಮಾರ್ಟ್ ಹೈಬ್ರಿಡ್ ಸೆಟ್ ಟಾಪ್ ಬಾಕ್ಸ್ ನ ಇಮೇಜ್ ಲೀಕ್ ಆಗಿದೆ.

ಡೇಟಾ ವಾಯ್ಸ್ ಮತ್ತು ಟಿವಿ ಒಂದೇ ಶ್ರೇಣಿಯಲ್ಲಿ ಸಿಗುವಂತೆ ಸಿದ್ಧಗೊಂಡಿರುವ ಜಿಯೋ ಫೈಬರ್ ನ ಸೆಟ್ ಟಾಪ್ ಬಾಕ್ಸ್ ನಲ್ಲಿ ಕೇಬಲ್ ಕನೆಕ್ಷನ್ ಹಾಗೂ ಇಂಟರ್ನೆಟ್ ಗೆ ಸಂಬಂಧಪಟ್ಟಂತೆ ಫ್ಲಾಟ್ ಗಳಿರುವುದು ಕಂಡುಬಂದಿದೆ.

ವಿವಿಧ ಸೇವೆಗಳು ಒಂದೇ ಬಂಡಲ್ನಲ್ಲಿ ಇರುವಂತೆ ಯೋಜನೆ ರೂಪಿಸಿರುವ ರಿಲಯನ್ಸ್, ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆ ಮಾಡುವ ಅವಕಾಶವನ್ನು ಒದಗಿಸುತ್ತದೆ ಎನ್ನಲಾಗಿದೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Kannada Dunia

Leave a Reply

Your email address will not be published. Required fields are marked *