ಬಿಗ್ ಬಾಸ್ -7ನೇ ಆವೃತ್ತಿ ಬಗ್ಗೆ ನಟ, ನಿರೂಪಕ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತ..?

ಬೆಂಗಳೂರು :ಈಗಾಗಲೇ ಬಿಗ್ ಬಾಸ್ -7ನೇ ಆವೃತ್ತಿ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಯಾರೆಲ್ಲ ಸ್ಪರ್ಧಿಗಳು ಹೋಗುತ್ತಾರೆಂಬ ಬಗ್ಗೆ ಕುತೂಹಲವೂ ಮನೆಮಾಡಿದೆ. ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ನಟ, ನಿರೂಪಕ ಕಿಚ್ಚ ಸುದೀಪ್, ಬಿಗ್ ಬಾಸ್ -7ನೇ ಆವೃತ್ತಿ ಸೆಲಿಬ್ರಿಟಿಗಳಿಗೆ ಮಾತ್ರ ಸೀಮಿತ ಎಂದು ತಿಳಿಸಿದ್ದಾರೆ.

ಇಂದು ನಡೆದ ಬಿಗ್ ಬಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ನಿರೂಪಣೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಣೆಯಿಂದ ತಮ್ಮ ಜೀವನದಲ್ಲೂ ಹಲವು ಬದಲಾವಣೆಯಾಗಿದೆ. ಈ ಕಾರ್ಯಕ್ರಮ ನನಗೆ ತಾಳ್ಮೆ ಕಲಿಸಿದೆ. ಸಂಕೀರ್ಣ ಮತ್ತು ಅನಿರೀಕ್ಷಿತ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವ ಕಲೆಯನ್ನೂ ಹೇಳಿಕೊಟ್ಟಿದೆ ಎಂದರು.
ಅಲ್ಲದೇ, ಕಾರ್ಯಕ್ರಮದ ನಿರೂಪಣೆ ವಿಷಯದಲ್ಲಿ ನಾನು ಎಂದಿಗೂ ಹಿಂದಿ ಬಿಗ್​ ಬಾಸ್​ನ ನಿರೂಪಕ ಸಲ್ಮಾನ್​ ಖಾನ್​ ಅವರನ್ನು ಅನುಕರಿಸಲಿಲ್ಲ. ಹಾಗಾಗಿ, ಈ ವಿಷಯದಲ್ಲಿ ಸ್ವಂತಿಕೆಯನ್ನು ಹೊಂದಲು ಸಾಧ್ಯವಾಯಿತು ಎಂದರು.

ಇನ್ನು ಬಿಗ್​ ಬಾಸ್​ ಬಗ್ಗೆ ನಿಮಗೆ ಇರುವಷ್ಟೇ ಕುತೂಹಲ ನನಗೂ ಇದೆ. ನಾನು ಯಾವತ್ತೂ ಕೂಡ ಸ್ಪರ್ಧಿಗಳ ಹೆಸರನ್ನು ಮೊದಲೇ ಕೇಳಿ ತಿಳಿದುಕೊಳ್ಳುವುದಿಲ್ಲ. ಸ್ಪರ್ಧಿಗಳ ಹೆಸರು ಮೊದಲೇ ರಿವೀಲ್​ ಆಗಬಾರದು ಎಂಬುದಕ್ಕೆ ಕಾರಣಗಳಿವೆ. ಮನೆಯೊಳಗೆ ಯಾರು ಬರುತ್ತಾರೆ ಎಂಬುದು ಮೊದಲೇ ಗೊತ್ತಾದರೆ ಸ್ಪರ್ಧಿಗಳು ಅದಕ್ಕೆ ತಕ್ಕಂತೆ ರಣತಂತ್ರಗಳನ್ನು ರೂಪಿಸಿಕೊಳ್ಳುವ ಅಪಾಯವಿರುತ್ತದೆ ಎಂದು ವಿವರಿಸಿದರು.

ಬಿಗ್​ ಬಾಸ್​ ಶೋ ಮೂಲತಃ ಸೆಲಬ್ರಟಿಗಳಿಗಾಗಿಯೇ ಆರಂಭವಾದಂಥ ಶೋ. ಆದರೆ ಕನ್ನಡದಲ್ಲಿ ಪ್ರಾಯೋಗಿಕವಾಗಿ ನಾವು ಜನಸಾಮಾನ್ಯರಿಗೂ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭಿಸಲಿಲ್ಲ. ಹಾಗಾಗಿ ಬಿಗ್​ ಬಾಸ್​ ಏಳನೇ ಆವೃತ್ತಿಯನ್ನು ಸೆಲೆಬ್ರಟಿಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Kannada News Now

(Visited 1 times, 1 visits today)
The Logical News

FREE
VIEW
canlı bahis