ಮಾಜಿ ‘DCM’ ಪರಮೇಶ್ವರ್ ಗೆ ‘ಐಟಿ ಶಾಕ್’ : ಇನ್ನೂ ಮೂರು ದಿನ ನಡೆಯಲಿದೆ ದಾಖಲೆ ಪರಿಶೀಲನೆ

ಬೆಂಗಳೂರು :ಕಾಂಗ್ರೆಸ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಳಿಕ ಈಗ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೂ ಐಟಿ ಬಿಸಿ ತಟ್ಟಿದೆ. ಇಂದು ಬೆಳಗ್ಗೆಯಿಂದಲೇ ಐಟಿ ಅಧಿಕಾರಿಗಳ ತಂಡ ಒಟ್ಟು 30 ಸ್ಥಳಗಳಲ್ಲಿ 300 ಹೆಚ್ಚು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಪರಮೇಶ್ವರ್ ಅವರ ಸದಾಶಿವನಗರದಲ್ಲಿರುವ ಮನೆ ಮೇಲೆ ಬೆಳಗ್ಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಸತತ 1 ಗಂಟೆಯವರೆಗೆ ಸುದೀರ್ಘ ತಪಾಸಣೆಯಲ್ಲಿ ತೊಡಗಿದರು.

ಬೆಳಗ್ಗೆ 6 ಗಂಟೆಗೆ ಪರಮೇಶ್ವರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಇನ್ನೂ ಮೂರು ದಿನಗಳವರೆಗೆ ವಿಚಾರಣೆ ಮುಂದುವರೆಯಲಿದೆ. ನಂತರ ಬೆಂಗಳೂರಿನ ಐಟಿ ಕಚೇರಿಗೆ ಪರಮೇಶ್ವರ್ ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸುವುದಾಗಿ ಐಟಿ ಮೂಲಗಳು ತಿಳಿಸಿದೆ.

ಇನ್ನೂ ಚಿಕ್ಕಬಳ್ಳಾಪುರದಲ್ಲಿರುವ ಕಾಂಗ್ರೆಸ್ ಮುಖಂಡ ಆರ್.ಎಲ್ ಜಾಲಪ್ಪ ಸಂಬಂಧಿ ಜಿ.ಹೆಚ್ ನಾಗರಾಜ್ ಮನೆಯಲ್ಲೂ ಐಟಿ ಅಧಿಕಾರಿಗಳು ತಪಾಸಣೆ ಮುಂದುವರೆಸಿದ್ದಾರೆ.
ನಾಗರಾಜ್ ಮನೆಯ ಗೇಟ್ ಗೆ ಬೀಗ ಜಡಿದು ತನಿಖೆ ನಡೆಸುತ್ತಿದ್ದಾರೆ. ಇದರಿಂದ ನಾಗರಾಜ್ ಅವರ ಅಭಿಮಾನಿಗಳು ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Kannada News Now

(Visited 1 times, 1 visits today)
The Logical News

FREE
VIEW
canlı bahis