ಸಕ್ರೆಬೈಲ್ ಆನೆ ಬಿಡಾರದಲ್ಲಿ ‘ಮಾರಣಾಂತಿಕ ಹರ್ಪಸ್ ವೈರಸ್’ ಪತ್ತೆ: 10 ಆನೆಗಳ ಸ್ಥಳಾಂತರ, ತೀವ್ರ ಕಟ್ಟೆಚ್ಚರ

ಶಿವಮೊಗ್ಗ :ಸಕ್ರೆಬೈಲ್ ಆನೆಶಿಬಿರದಲ್ಲಿ ಮಾರಣಾಂತಿಕ ಹರ್ಪಸ್ ವೈರಸ್ ಪತ್ತೆಯಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಮಾರಕ ವೈರಾಣು ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ನಾಲ್ಕು ಮರಿ ಆನೆ ಸೇರಿ 10 ಆನೆಗಳನ್ನು ಸಕ್ರೆಬೈಲು ಅರಣ್ಯ ಪ್ರದೇಶದ ನಂದಳ್ಳಕ್ಕೆ ಸ್ಥಳಾಂತರಿಸಲಾಗಿದೆ.

ಈ ಹಿಂದೆ ಮಧ್ಯಪ್ರದೇಶ ಮತ್ತು ಒಡಿಶಾದ ಭುವನೇಶ್ವರ ಮೃಗಾಲಯದಲ್ಲಿ ಎಂಡೋಥಿಲಿಯೋಟ್ರೋಪಿಕ್‌ ಹರ್ಪಸ್‌ ವೈರಸ್‌ ನಿಂದಾಗಿ ಹಲವು ಆನೆಗಳು ಮೃತಪಟ್ಟಿದ್ದವು. ಆ ಬಳಿಕ ರಾಜ್ಯದ ಯಾವುದೇ ಆನೆ ಬಿಡಾರಗಳಲ್ಲಿ ಈ ವೈರಸ್‌ ಪತ್ತೆಯಾಗಿರಲಿಲ್ಲ. ಆದರೆ, ಈಗ ಸಕ್ರೆಬೈಲು ಶಿಬಿರದಲ್ಲಿ ಈ ವೈರಸ್‌ ಪತ್ತೆಯಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ.

2019ರ ಜೂನ್‌ನಲ್ಲಿ ಭಾನುಮತಿಯ ಮರಿಯಾನೆ ಭಾರತಿ ಮತ್ತು ಜುಲೈನಲ್ಲಿ ಶಾರದಾ ಆನೆಗಳು ಕ್ಯಾಂಪ್‌ನಲ್ಲಿ ಮೃತಪಟ್ಟಿದ್ದವು.
ಆದರೆ, ರೋಗ ನಿರೋಧಕ ಶಕ್ತಿ ಕೊರತೆಯಿಂದ ಮರಿಯಾನೆಗಳು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತು. ಆದರೆ, ಆಗಸ್ಟ್‌ನಲ್ಲಿ 32 ವರ್ಷದ ನಾಗಣ್ಣ ಮೃತಪಟ್ಟಾಗ ಬೆಂಗಳೂರಿನಿಂದ ತಜ್ಞರ ಆಗಮಿಸಿ ಆನೆಯ ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಿದ್ದರು. ಆಗ ಹರ್ಪಸ್ ವೈರಸ್ ಪತ್ತೆಯಾಗಿದೆ. ಇದು ರಾಜ್ಯದ ಆನೆ ಬಿಡಾರಗಳಲ್ಲಿ ಕಂಡುಬಂದ ಮೊದಲ ಪ್ರಕರಣವೆಂದು ಅರಣ್ಯ ಇಲಾಖೆ ಅಧಿಕೃತ ಮೂಲಗಳು ತಿಳಿಸಿವೆ.

ಈ ಕುರಿತು ವನ್ಯಜೀವಿ ವಿಭಾಗದ ಡಿಎಫ್‌ಒ ಚಂದ್ರಶೇಖರ್‌ ವಿವರ ನೀಡಿದ್ದು, ಸದ್ಯ ಕ್ಯಾಂಪ್ ನಿಂದ 10 ಆನೆಗಳನ್ನು ಸಕ್ರೆಬೈಲು ಅರಣ್ಯ ಪ್ರದೇಶದಲ್ಲಿರುವ 8 ಕಿ.ಮೀ ದೂರದ ನಂದಳ್ಳಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನು 13 ಆನೆಗಳು ಕ್ಯಾಂಪ್ ನಲ್ಲಿವೆ ಎಂದು ತಿಳಿಸಿದ್ದಾರೆ. ಎಲ್ಲ ಆನೆಗಳ ಆರೋಗ್ಯ ತಪಾಸಣೆಗೆ ಚಿಂತನೆ ನಡೆಸಿದ್ದು, ಅರಣ್ಯ ಇಲಾಖೆ ಬಳಿ ಸೂಕ್ತ ವ್ಯವಸ್ಥೆಗಳಿಲ್ಲದೆ ಶಿವಮೊಗ್ಗದ ಸೋಮಿನಕೊಪ್ಪದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯ ಪಡೆಯಲು ನಿರ್ಧರಿಸಲಾಗಿದೆ. ಆಯಂಟಿ ವೈರಲ್‌ ಡ್ರಗ್‌ ತರಿಸಿಕೊಳ್ಳಲಾಗಿದ್ದು,ಅಗತ್ಯವಿರುವ ಆನೆಗಳಿಗೆ ಇದನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ…

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Kannada News Now

(Visited 1 times, 1 visits today)
The Logical News

FREE
VIEW
canlı bahis