ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌ನಲ್ಲಿ ಮಿಂಚಿದ ಕುಡ್ಲದ ದಂಪತಿ!

ಮಂಗಳೂರು, ಅ.31: ನಗರದ ಯುವ ಶಿಕ್ಷಕರಿಬ್ಬರು ತಮ್ಮ ಅದ್ಭುತ ಪ್ರತಿಭೆಯ ಮೂಲಕ ‘ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್’ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಕನ್ನಡ ಶಿಕ್ಷಕಿ ಅಕ್ಷತಾ ಕುಡ್ಲ ಒಂದು ನಿಮಿಷದಲ್ಲಿ 40ಕ್ಕೂ ಅಧಿಕ ಮಿಮಿಕ್ರಿ ಮೂಲಕ ದಾಖಲೆ ಮಾಡಿದರೆ, ಚೇತನ್ ಕೊಪ್ಪ ಅತ್ಯಲ್ಪ ಸಮಯದಲ್ಲಿ 10×11 ಅಡಿ ಗಾತ್ರದ ಗಾಂಧೀಜಿಯ ಭಾವಚಿತ್ರದ ಮೂಲಕ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಪ್ರಪಂಚದ 800ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌ನಲ್ಲಿ ಇವರಿಬ್ಬರು ದಾಖಲೆ ನಿರ್ಮಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಸಾಧಕರ ಜತೆ ಸಂತಸ ಹಂಚಿಕೊಂಡ ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್, ತಮ್ಮ ಶಿಷ್ಯೆ ಹಾಗೂ ತಮ್ಮ ಕೇಂದ್ರದಲ್ಲಿ ಶಿಕ್ಷಕರಾಗಿದ್ದ ಚೇತನ್ ಕೊಪ್ಪರ ಸಾಧನೆಯ ಬಗ್ಗೆ ವಿವರ ನೀಡಿದರು.
ಅಕ್ಷತಾ ಕುಡ್ಲ ಮರಕಡ ನಿವಾಸಿ ಸಿದ್ದು ಪೂಜಾರಿ ಮತ್ತು ಹರಿಣಾಕ್ಷಿ ದಂಪತಿಯ ಪುತ್ರಿ.

ಯುವಜನ ಮೇಳಗಳಲ್ಲಿ ರಾಜ್ಯ ಮಟ್ಟದ ಹಾಡಿಗಾಗಿ ಪ್ರಥಮ ಸ್ಥಾನ, ರಾಷ್ಟ್ರ ಮಟ್ಟದ ಮಿಮಿಕ್ರಿಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ದೇಶ ವಿದೇಶಗಳಲ್ಲಿ ಅಕ್ಷತಾ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಗೋಪಾಡ್ಕರ್‌ರವರ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಯೂ ಆಗಿದ್ದ ಅಕ್ಷತಾ ಹಾಡುಗಾರಿಕೆ, ನೃತ್ಯದಲ್ಲೂ ರಾಷ್ಟ್ರ ಮಟ್ಟದಲ್ಲಿ ಮಿಂಚಿದವರು. ಇದೀಗ ಈಗ 16 ಗಂಟೆಗಳ ನಿರಂತರ 300ಕ್ಕೂ ಅಧಿಕ ಹಾಡುಗಳನ್ನು ಹಾಡುವ ದಾಖಲೆಗೆ ಮುಂದಾಗಿದ್ದಾರೆ.

ತನ್ನ ಗುರು ಗೋಪಾಡ್ಕರ್ ಹಾಗೂ ಇನ್ನೋರ್ವ ವಿಶ್ವ ದಾಖಲೆ ಸರದಾರ ಚೇತನ್ ಕೊಪ್ಪ ಜತೆ ಸುದ್ದಿಗೋಷ್ಠಿಯಲ್ಲಿ ಅಕ್ಷತಾ ತನ್ನ ಮಿಮಿಕ್ರಿಯ ಒಂದು ಝಲಕ್ ನೀಡಿದ್ದ ಹೀಗೆ. ಉಳಾಯಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿರುವ ಚೇತನ್ ಕೊಪ್ಪ ಕೊಪ್ಪದ ಬಾಬಣ್ಣ ಮತ್ತು ಪಾರ್ವತಿ ದಂಪತಿಯ ಪುತ್ರ. ಲೇಖಕರೂ ಆಗಿರುವ ಇವರು ಸೀರತ್ ಅಭಿಯಾನದ ಪ್ರಯುಕ್ತ ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಇದೀಗ ಇವರು 50×50 ಅಡಿ ಗಾತ್ರದ ಬೃಹತ್ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Varthabharathi

(Visited 1 times, 1 visits today)
The Logical News

FREE
VIEW
canlı bahis