ಮನೆಯ ʼಮುಖ್ಯ ದ್ವಾರʼದ ಮುಂದೆ ಈ ವಸ್ತುಗಳಿರದಂತೆ ನೋಡಿಕೊಳ್ಳಿ

ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರಲಿ ಎಂದು ಎಲ್ಲರೂ ಬಯಸ್ತಾರೆ. ಎಲ್ಲರ ಆಸೆ ಈಡೇರಲಿ, ಆರ್ಥಿಕ ಪರಿಸ್ಥಿತಿ ಸುಧಾರಿಸಿ ಆರೋಗ್ಯವಾಗಿರಲಿ ಎಂಬುದು ಎಲ್ಲರ ಆಸೆ. ಆರ್ಥಿಕ ಸಮಸ್ಯೆ ನೀಗಿಸಲು ದಿನವಿಡಿ ದುಡಿಯುವವರಿದ್ದಾರೆ. ವಾಸ್ತು ಶಾಸ್ತ್ರ ನಂಬುವವರು ಅದ್ರ ಪ್ರಕಾರ ಮನೆ ನಿರ್ಮಾಣ ಮಾಡಿಕೊಳ್ತಾರೆ. ಜೊತೆಗೆ ವಾಸ್ತು ಶಾಸ್ತ್ರದ ಕೆಲವೊಂದು ನಿಯಮಗಳನ್ನು ಪಾಲಿಸ್ತಾರೆ.

ಮನೆಯೊಳಗೆ ಅಥವಾ ಮನೆಯ ಮುಖ್ಯದ್ವಾರದಲ್ಲಿ ವಾಸ್ತು ನಿಯಮ ಪಾಲಿಸಿದ್ರೆ ಸಾಲದು. ಮನೆಯ ಮುಂದಿರುವ ಹಾಗೂ ಅಕ್ಕಪಕ್ಕದಲ್ಲಿರುವ ವಸ್ತು ಕೂಡ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡಲು ಕಾರಣವಾಗುತ್ತವೆ. ಮನೆಯಲ್ಲಿ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸಮಸ್ಯೆ ಕಾಡಲು ಶುರುವಾಗುತ್ತದೆ. ಹಾಗಾಗಿ ಮನೆಯ ಅಕ್ಕಪಕ್ಕದಲ್ಲಿರುವ ವಸ್ತುಗಳ ಬಗ್ಗೆ ಕೂಡ ಗಮನ ನೀಡುವುದು ಬಹಳ ಮುಖ್ಯ.

ಮನೆಯ ಮುಂದೆ ಕೊಳಚೆ ನೀರು ಸಂಗ್ರಹವಾಗಿದ್ದರೆ ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಇದು ಪಶ್ಚಿಮ ದಿಕ್ಕಿನಲ್ಲಿದ್ದರೆ ಧನ ಹಾನಿಯುಂಟಾಗುತ್ತದೆ.

ಮನೆಯ ಮುಂದೆ ಕಲ್ಲುಗಳ ಸಂಗ್ರಹ ಕೂಡ ಒಳ್ಳೆಯದಲ್ಲ. ಇದು ವಿರೋಧಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಕುಟುಂಬವನ್ನು ಒಡೆಯುವ ಜೊತೆಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮನೆಯ ಮುಂದೆ ಅನುಪಯುಕ್ತ ವಸ್ತುಗಳಿದ್ದರೆ ಅದು ವಾಸ್ತು ದೋಷವನ್ನುಂಟು ಮಾಡುತ್ತದೆ.

ಮನೆಯ ಮುಖ್ಯ ದ್ವಾರದ ಮುಂದೆ ವಿದ್ಯುತ್ ಕಂಬವಿದ್ದರೆ ಅದು ಪ್ರಗತಿಗೆ ಅಡ್ಡಿಯುಂಟು ಮಾಡುತ್ತದೆ.

ಮನೆಯ ಮುಖ್ಯದ್ವಾರಕ್ಕಿಂತ ಎತ್ತರಕ್ಕೆ ರಸ್ತೆ ಇದ್ದರೆ ಉನ್ನತಿಗೆ ಅಡ್ಡಿಯುಂಟಾಗುತ್ತದೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Kannada Dunia

Leave a Reply

Your email address will not be published. Required fields are marked *