ಜ್ಯೋತಿರಾದಿತ್ಯ ಪ್ರೊಫೈಲ್‌ ಗೊಂದಲ ; ಕಾಂಗ್ರೆಸ್‌ ಹುದ್ದೆಗಳ ವಿವರ ಡಿಲೀಟ್‌ ಮಾಡಿದ ನಾಯಕ

ಭೋಪಾಲ: ಮೈಕ್ರೋ ಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ನಲ್ಲಿ ಜಾಲಾಡುವವರಿಗೆ ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಖಾತೆ ಪರಿಚಿತವೇ. ಆದರೆ ಅವರು ತಮ್ಮ ಪ್ರೊಫೈಲ್‌ ವಿವರಣೆಯಲ್ಲಿ ಬದಲು ಮಾಡಿಕೊಂಡದ್ದು ಸೋಮವಾರ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಈಗ ಅವರ ಪ್ರೊಫೈಲ್‌ನಲ್ಲಿ ಸಾರ್ವಜನಿಕ ಸೇವಕ, ಕ್ರಿಕೆಟ್‌ ಪ್ರೇಮಿ ಎಂಬ ವಿವರಣೆ ಮಾತ್ರವಿದೆ. ಈ ಹಿಂದೆ ಗುಣಾ ಕ್ಷೇತ್ರದ ಮಾಜಿ ಸಂಸದ (2002-2019), ಇಂಧನ ಖಾತೆ ಮಾಜಿ ಸಚಿವ, ವಾಣಿಜ್ಯ ಮತ್ತು ಕೈಗಾರಿಕೆ, ಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ಅಂಚೆ ಖಾತೆ ಮಾಜಿ ಸಹಾಯಕ ಸಚಿವ ಎಂಬ ವಿವರಣೆ ಇತ್ತು.

ಕಾಂಗ್ರೆಸ್‌ನ ಪ್ರಮುಖ ನೇತಾರರೂ ಆಗಿರುವ ಅವರು, ‘ಕಾಂಗ್ರೆಸ್‌ ನಾಯಕ’ ಎನ್ನುವುದನ್ನೂ ಬದಲು ಮಾಡಿದ್ದು ಕುತೂಹಲ ಹಾಗೂ ಊಹಾಪೋಪಗಳಿಗೆ ಕಾರಣವಾಗಿದೆ.
ಅವರು ಕಾಂಗ್ರೆಸ್‌ನಿಂದ ದೂರ ಸರಿಯುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ರಾಜಕೀಯ ವ್ಯಕ್ತಿಗಳ ಪ್ರೊಫೈಲ್‌ ವಿವರಣೆಯಲ್ಲಿ ಬದಲಾದರೆ, ಅದು ಚರ್ಚೆಗೆ ಗ್ರಾಸವಾಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ಈ ಬಗ್ಗೆ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ ಸಿಂಧಿಯಾ ‘ಒಂದು ತಿಂಗಳ ಹಿಂದೆಯೇ ಈ ಬದಲಾವಣೆ ಮಾಡಿಕೊಂಡಿದ್ದೇನೆ. ಅದರಲ್ಲೇನೂ ವಿಶೇಷವಿಲ್ಲ. ಏಕೆಂದರೆ ನನಗೆ ಹಲವು ವಿಚಾರಗಳ ಬಗ್ಗೆ ಸಲಹೆ, ದೂರುಗಳು ಬರುತ್ತಿದ್ದವು. ಸದ್ಯ ಅದರ ಬಗೆಗಿನ ಚರ್ಚೆ ಏಕಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದ ಕೇಂದ್ರದ ನಿರ್ಧಾರಕ್ಕೆ ಅವರು ಈ ಹಿಂದೆ ಬೆಂಬಲ ವ್ಯಕ್ತಪಡಿಸಿದ್ದರು ಮತ್ತು ಮಧ್ಯಪ್ರದೇಶದ ಕಾಂಗ್ರೆಸ್‌ ಸರಕಾರದ ವಿರುದ್ಧವೇ ಟೀಕಾ ಪ್ರಹಾರ ನಡೆಸಿದ್ದರು.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Udayavani

Leave a Reply

Your email address will not be published. Required fields are marked *