ಮರಾಠಿಗರಿಗೆ ಭರಪೂರ ಯೋಜನೆ ಪ್ರಕಟಿಸಿದ ಮಹಾ ವಿಕಾಸ್‌ ಅಘಾಡಿ

ಮುಂಬಯಿ: ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಸರಕಾರ ಜನರಿಗೆ ಬರಪೂರ ಯೋಜನೆಯನ್ನು ನೀಡಿದೆ. ಸಾಮಾನ್ಯ ಕನಿಷ್ಠ ಯೋಜನೆಯಡಿ ಮಹಾರಾಷ್ಟ್ರ ಜನರಿಗೆ ನೀಡಿರುವ ಅಘಾಡಿ, ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಮೀಸಲಾತಿ, 10 ರೂಗಳಿಗೆ ಊಟ ಸೇರಿದಂತೆ ಜನಾಕರ್ಷಣೆಯ ಹಲವು ಯೋಜನೆಗಳನ್ನು ಜನರಿಗೆ ನೀಡವುದಾಗಿ ಘೋಷಿಸಿದೆ. ಕ್ಲಿನಿಕ್‌ ಸೇವೆ, ಕ್ಯಾಂಟೀನ್‌ನಲ್ಲಿ ಸಬ್ಸಿಡಿ, ರೈತರ ಸಾಲ ಮನ್ನಾ, ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಮೊದಲಾದ ಯೋಜನೆಗಳು ಸರಕಾರದ ಘೋಷಣೆಯಲ್ಲಿ ಪಾಲು ಪಡೆದಿದೆ.

ಶಿವಸೇನೆಯ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಸಾಮಾನ್ಯ ಕನಿಷ್ಠ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. ಯೋಜನೆಯಲ್ಲಿ ರೈತರು, ಮಹಿಳೆ, ಶಿಕ್ಷಣ, ಆರೋಗ್ಯ, ನಿರುದ್ಯೋಗ ಮತ್ತು ಸಾಮಾಜಿಕ ನ್ಯಾಯ ಸೇರಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಈ ಯೋಜನೆಗಳು ಜಾರಿಯಾಗುವಂತೆ ನೋಡಿಕೊಳ್ಳಲು ಎರಡು ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಒಂದು ಸಮಿತಿಯಲ್ಲಿ ಸಂಪುಟದ ಸಚಿವರು ಇರಲಿದ್ದು, ಮತ್ತೊಂದು ಇಡೀ ಮೈತ್ರಿಯನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದ್ದು, ಇದರಲ್ಲಿ 3 ಪಕ್ಷಗಳ ಪ್ರಮುಖರು ಇರಲಿದ್ದಾರೆ.

ಪ್ರಮುಖ ಘೋಷಣೆಗಳು

-10 ರೂಪಾಯಿಗೆ ಗುಣಮಟ್ಟದ ಆಹಾರ.

– ಅಕಾಲಿಕ ಮಳೆ ಮತ್ತು ಪ್ರವಾಹದಿಂದ ಬಳಲುತ್ತಿರುವ ರೈತರಿಗೆ ಶೀಘ್ರ ನೆರವಿನ ಭರವಸೆ.

– ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ.

– ಆರ್ಥಿಕವಾಗಿ ದುರ್ಬಲರಾದ ಕೃಷಿ ಕಾರ್ಮಿಕರ ಮಕ್ಕಳಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲ.

– ರೈತರ ಸಾಲ ಮನ್ನಾ ಯೋಜನೆ.

– ಸ್ಥಳೀಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಶೇ.80ರಷ್ಟು ಮೀಸಲಾತಿ. ಇದಕ್ಕಾಗಿ ಕಾನೂನು.

– ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ.

– ಒಂದು ರೂಪಾಯಿ ಕ್ಲಿನಿಕ್‌ಗಳ ಸ್ಥಾಪನೆ ಹಾಗೂ ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಆರೋಗ್ಯ ವಿಮೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Udayavani

(Visited 1 times, 1 visits today)
The Logical News

FREE
VIEW
canlı bahis