ಬಯಲು ಶೌಚ ಮಾಡಿದ್ರೆ ಪಡಿತರ ಚೀಟಿ ರದ್ದು

ಔರಂಗಾಬಾದ್‌: ಬಯಲು ಶೌಚ ತೊಡೆದು ಹಾಕುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಜರಂಡಿ ಗ್ರಾಮ ಪಂಚಾಯತಿ ಬಯಲು ಶೌಚ ಮಾಡಿದವರ ಕುಟುಂಬದ ಪಡಿತರ ಚೀಟಿಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದೆ. ಕುಟುಂಬದ ಒಬ್ಬ ವ್ಯಕ್ತಿ ಈ ಕೃತ್ಯ ಮಾಡಿ ಸಿಕ್ಕಿಬಿದ್ದರೂ ಇಡೀ ಕುಟುಂಬವೇ ಪಡಿತರ ಚೀಟಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸರಪಂಚರು ತಿಳಿಸಿದ್ದಾರೆ. ಬಯಲು ಶೌಚದಲ್ಲಿ ತೊಡಗಿದವರ ಫೋಟೊ ತೆಗೆದು ನಮಗೆ ನೀಡಿದವರಿಗೆ ಬಹುಮಾನದ ರೂಪವಾಗಿ ತೆರಿಗೆ ವಿನಾಯಿತಿ ಕೂಡ ನೀಡಲಾಗುವುದು ಎಂದೂ ಘೋಷಿಸಿದ್ದಾರೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Udayavani

Leave a Reply

Your email address will not be published. Required fields are marked *