ಪಾಸ್​ ತೋರಿಸಿದರೂ ಪೊಲೀಸರೂ ಒಪ್ಪಲಿಲ್ಲ, ಬೇಕೆಂದೇ ನನಗೆ ಬಸ್ಕಿ ಹೊಡೆಸಿ, ಅಪಹಾಸ್ಯ ಮಾಡಿದರು.

ನವದೆಹಲಿ: ನಾನು ನನ್ನ ಫ್ಯಾಕ್ಟರಿಗೆ ಹೋಗಿ ನನ್ನ ಐಷಾರಾಮಿ ಪಾರ್ಷ್​ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದೆ. ಆ ಸಂದರ್ಭದಲ್ಲಿ ನನ್ನನ್ನು ಬೇಕೆಂದೇ ತಡೆದ ಪೊಲೀಸರು, ತೋರಿಸಿದ ಪಾಸ್​ ಅನ್ನು ಒಪ್ಪದೆ ಬಸ್ಕಿ ಹೊಡೆಸಿ ಅಪಹಾಸ್ಯ ಮಾಡಿದರು ಎಂದು ಇಂದೋರ್​ನ ಕೈಗಾರಿಕೋದ್ಯಮಿ ಸಂಸ್ಕಾರ್​ ದರ್ಯಾನಿ ಅಲವತ್ತುಕೊಂಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿರುವ ಅವರು, ನಾನು ಕೆಲಸದ ಮೇಲೆ ಫ್ಯಾಕ್ಟರಿಗೆ ಹೋಗಿದ್ದಾಗಿಯೂ, ಅನಗತ್ಯವಾಗಿ ತಿರುಗುತ್ತಿರಲಿಲ್ಲವೆಂದು ಪೊಲೀಸರಿಗೆ ಮನವರಿಕೆ ಮಾಡಿಕೊಡಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಅವರು ನನ್ನ ಮಾತನ್ನು ಕೇಳಿಸಿಕೊಳ್ಳಲು ತಯಾರಿರಲಿಲ್ಲ ಎಂದು ಹೇಳಿದ್ದಾರೆ.

ಇಂದೋರ್​ನಲ್ಲಿ ಭಾನುವಾರ ಬೆಳಗ್ಗೆ ಐಷಾರಾಮಿ ಪಾರ್ಷ್​ ಕಾರಿನಲ್ಲಿ ಹೋಗುವಾಗ ಸಂಸ್ಕಾರ್​ ದರ್ಯಾನಿ ಅವರನ್ನು ಪೊಲೀಸರು ತಡೆದಿದ್ದರು.
ಲಾಕ್​ಡೌನ್​ ಅವಧಿಯಲ್ಲಿ ಅನಗತ್ಯವಾಗಿ ತಿರುಗುತ್ತಿರುವುದಾಗಿಯೂ, ಮಾಸ್ಕ್​ ಧರಿಸಿರಲಿಲ್ಲ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಸಂಸ್ಕಾರ್​ ಅವರನ್ನು ಕಾರಿನಿಂದ ಕೆಳಗಿಳಿಸಿದ್ದ ಪೊಲೀಸರು, ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದರು. ಸಿಬ್ಬಂದಿಯ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಇಂದೋರ್​ ಎಎಸ್​ಪಿ, ಕಾರು ಚಾಲಕ ಮಾಸ್ಕ್​ ಧರಿಸಿರಲಿಲ್ಲ. ಹಾಗಾಗಿ ನಮ್ಮ ಸಿಬ್ಬಂದಿ ಅವರಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಅಲ್ಲದೆ, ಅನಗತ್ಯವಾಗಿ ತಿರುಗುವವರನ್ನು ನಮ್ಮ ಸಿಬ್ಬಂದಿ ತಡೆದು ವಿಚಾರಿಸುತ್ತಿದ್ದಾರೆ ಎಂದು ಹೇಳಿದ್ದರು.

ಗುರುಗ್ರಾಮದ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳಿಗೆ ಜುಲೈವರೆಗೆ ಮನೆಯಿಂದಲೇ ಕೆಲಸ; ಕೋವಿಡ್​ 19 ಹಿನ್ನೆಲೆ

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Vijayvani

(Visited 1 times, 1 visits today)
The Logical News

FREE
VIEW
canlı bahis