ನಾಳೆಯಿಂದ ಶಿವಮೊಗ್ಗದಲ್ಲಿ ಮದ್ಯ ಮಾರಾಟ : ಒಬ್ಬರಿಗೆ ಎಷ್ಟು ಬಾಟಲ್ ಸಿಗುತ್ತೆ ಗೊತ್ತಾ.?

ಶಿವಮೊಗ್ಗ : ಮೇ.4ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಕೇಂದ್ರ ಮಾರ್ಗಸೂಚಿಯಂತೆ ಅಬಕಾರಿ ಇಲಾಖೆ ಅವಕಾಶ ನೀಡಿದೆ. ಹೀಗಾಗಿ ಮಲೆನಾಡಿನ ಹೆಬ್ಬಾಗಿಲು, ಗ್ರೀನ್ ಝೋನ್ ಜಿಲ್ಲೆ ಶಿವಮೊಗ್ಗದಲ್ಲೂ ಮದ್ಯ ಮಾರಾಟ ಆರಂಭವಾಗಲಿದೆ. ವೈನ್ ಶಾಪ್, ಎಂ ಎಸ್ ಐ ಎಲ್ ಮಾತ್ರವೇ ತೆರೆದು ಪಾರ್ಸಲ್ ಮೂಲಕ ಮದ್ಯ ತೆಗೆದುಕೊಂಡು ಹೋಗಲು ಜಿಲ್ಲಾಡಳಿತ ಅವಕಾಶ ನೀಡಿದೆ. ಒಬ್ಬರಿಗೆ ಎಷ್ಟು ಬಾಟಲ್ ಸಿಗುತ್ತದೆ ಎಂಬ ಬಗ್ಗೆ ಮುಂದೆ ಓದಿ..

ಶಿವಮೊಗ್ಗ ಜಿಲ್ಲೆಯಲ್ಲಿ ಮೇ.4ರ ನಾಳೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಸಂಬಂಧ, ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಮದ್ಯದಂಡಿಗೆ ಮಾಲೀಕರ ಸಭೆ ಕರೆಯಲಾಗಿತ್ತು. ಡಿಎಆರ್ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾ.ಅಜಿತ್ ಕುಮಾರ್, ದೊಡ್ಡಪೇಟೆ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ವಸಂತ ಕುಮಾರ್ ಭಾಗವಹಿಸಿ, ಮದ್ಯ ಮಾರಾಟ ಕುರಿತಂತ ಮಾರ್ಗ ಸೂಚಿಯ ಕುರಿತಂತೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಅಬಕಾರಿ ಇಲಾಖೆಯ ಉಪ ಆಯುಕ್ತ ಕ್ಯಾ.ಅಜಿತ್ ಕುಮಾರ್, ಕೇಂದ್ರ ಮಾರ್ಗ ಸೂಚಿಯಂತೆ ರಾಜ್ಯ ಸರ್ಕಾರ ನಾಳೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಇವತ್ತು ಸಂಜೆಯಿಂದ ನಾಳೆ ಬೆಳಿಗ್ಗೆಯವರೆಗೆ ಮದ್ಯದಂಗಡಿಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಈಗಾಗಲೇ ಮದ್ಯದಂಗಡಿಗಳಿಗೆ ಮದ್ಯ ಮಾರಾಟ ಸಂಬಂಧ ತಿಳುವಳಿಕೆ ಪತ್ರ ಕಳುಹಿಸಲಾಗಿದೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ರಾಜ್ಯ ಸರ್ಕಾರ ಏಪ್ರಿಲ್ 1ರಿಂದ ಮದ್ಯ ಮಾರಾಟಕ್ಕೆ ಹೊಸ ದರ ನಿಗಧಿಪಡಿಸಿದೆ. ಅದರಂತೆ ಮದ್ಯ ಮಾರಾಟ ಮಾಡಬೇಕು. ನಿಗದಿಗಿಂತಲೂ ಹೆಚ್ಚಿನ ಮದ್ಯ ಮಾರಾಟ ಮಾಡುವಂತಿಲ್ಲ. ಕೌಂಟರ್ ಸೇಲ್ ಮಾತ್ರವೇ ಮಾಡಬೇಕು. ಹಳ್ಳಿಗೆ, ಮಿಲಿಟರಿ ಹೊಟೇಲ್ ಗಳಿಗೆ ಮಾರಾಟ ಮಾಡಿದ್ರೇ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಂದಹಾಗೇ ನಾಳೆ ಬಾರ್ ಒಪನ್ ಆಗುತ್ತದೆ ಎಷ್ಟು ಬೇಕಾದ್ರೂ ಅಷ್ಟು ಖರೀದಿಸಿ ಕುಡಿಯಬಹುದು ಅಂತ ಖುಷಿ ಪಡಬೇಡಿ. ನಾಳೆಯಿಂದ ಒಬ್ಬರಿಗೆ ಒಂದು ಕ್ವಾಟರ್, ಇಲ್ಲವೇ 90 ಎಂ ಎಲ್ ನ ಹತ್ತು ಪೌಚ್ ಇಲ್ಲವೇ ಒಂದು ಪುಲ್ ಬಾಟಲ್ ಮಾತ್ರವೇ ಸಿಗಲಿದೆ. ಇನ್ನೂ ಬಿಯರ್ ಪ್ರಿಯರಾದ್ರೇ… ನಾಲ್ಕು ಪುಲ್ ಬಾಟಲ್ ಬಿಯರ್ ಇಲ್ಲವೇ 6 ಪಿಂಟ್ ಮಾತ್ರವೇ ಖರೀದಿಸಿ, ಕುಡಿಯೋಕೆ ಸಾಧ್ಯ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Kannada News Now

(Visited 4 times, 1 visits today)
The Logical News

FREE
VIEW
canlı bahis