ಲೋಕಪಾಲ್ ಸದಸ್ಯ ಅಜಯ್ ಕೆ ತ್ರಿಪಾಠಿ ಕೊರೋನಾಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಲೋಕಪಾಲ್ ಸದಸ್ಯ, ನಿವೃತ್ತ ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ ಅವರು ಕೊವಿಡ್-19ಗೆ ಬಲಿಯಾಗಿದ್ದಾರೆ.

ಸುಮಾರು ಒಂದು ತಿಂಗಳ ಹಿಂದೆ ತ್ರಿಪಾಠಿ ಅವರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಅಂದಿನಿಂದ ದೆಹಲಿಯ ಕೊವಿಡ್-19 ನಿಯೋಜಿತ ಆಸ್ಪತ್ರೆ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಛತ್ತೀಸ್ ಗಢ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ತ್ರಿಪಾಠಿ ಅವರು ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್ ನಲ್ಲಿದ್ದ ತ್ರಿಪಾಠಿ ಅವರು ಇಂದು ರಾತ್ರಿ 9 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತ್ರಿಪಾಠಿ ಅವರು ಭ್ರಷ್ಟಾಚಾರ ವಿರೋಧಿ ಲೋಕಪಾಲ್ ನ ನಾಲ್ವರು ಸದಸ್ಯರಲ್ಲಿ ಒಬ್ಬರಾಗಿದ್ದರು.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Kannada Prabha

(Visited 8 times, 1 visits today)
The Logical News

FREE
VIEW
canlı bahis