Covid-19 World Update| 2,40,000 ಕ್ಕಿಂತಲೂ ಹೆಚ್ಚು ಸಾವು

ವಾಷಿಂಗ್ಟನ್: ಜಗತ್ತಿನಾದ್ಯಂತ ಹರಡಿರುವ ಕೋವಿಡ್-19 ರೋಗಕ್ಕೆ 2,40,000 ಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಎಎಫ್‌ಪಿ ಸುದ್ದಿಸಂಸ್ಥೆಯ ಅಂಕಿಅಂಶ ಪ್ರಕಾರ ಒಟ್ಟು ಮರಣ ಸಂಖ್ಯೆಯ ಶೇ.85ರಷ್ಟು ಸಾವು ಯುರೋಪ್ ಮತ್ತು ಅಮೆರಿಕದಲ್ಲಿ ಸಂಭವಿಸಿದೆ.

ಅಂಕಿ ಅಂಶಗಳ ಪ್ರಕಾರ ಇಲ್ಲಿಯವರೆಗೆ 3371435 ಪ್ರಕರಣಗಳು ವರದಿಯಾಗಿದ್ದು 24,0231 ಮಂದಿ ಸಾವಿಗೀಡಾಗಿದ್ದಾರೆ. ಯುರೋಪ್‌ನಲ್ಲಿ ಅತೀ ಹೆಚ್ಚು ಅಂದರೆ 1,516,635 ಪ್ರಕರಣಗಳು ವರದಿಯಾಗಿದ್ದು 141,475 ಸಾವು ಸಂಭವಿಸಿದೆ.
ಅಮೆರಿಕದಲ್ಲಿ 65,173, ಇಟಲಿಯಲ್ಲಿ 28,263, ಬ್ರಿಟನ್‌ನಲ್ಲಿ 28,131, ಸ್ಪೇನ್‌- 25100 ಮತ್ತು ಫ್ರಾನ್ಸ್‌ನಲ್ಲಿ 24594 ಸಾವು ಸಂಭವಿಸಿದೆ.

ಪಾಕಿಸ್ತಾನದಲ್ಲಿ ಭಾನುವಾರದವರೆಗಿನ ಅಂಕಿ ಅಂಶಗಳ ಪ್ರಕಾರ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 19,000 ದಾಟಿದೆ.
ಕಳೆದ 24 ಗಂಟೆಗಳಲ್ಲಿ 989 ಹೊಸ ಪ್ರಕರಣ ಪತ್ತೆಯಾಗಿದೆ. ಅಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ 23 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 440ಕ್ಕೇರಿದೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Prajavani

(Visited 1 times, 1 visits today)
The Logical News

FREE
VIEW
canlı bahis